ರಿಷಿ ಕಪೂರ್‌ (೪ ಸೆಪ್ಟಂಬರ್ ೧೯೫೨- ೩೦ ಏಪ್ರಿಲ್ ೨೦೨೦) ಅವರು ಭಾರತದ ಬಾಲಿವುಡ್ನಟ, ಚಿತ್ರ ತಯಾರಕ ಮತ್ತು ನಿರ್ದೇಶಕರು. == ಆರಂಭಿಕ ಜೀವನ == ಮುಂಬಯಿನಲ್ಲಿ ಜನನ, ಕಪೂರ್‌ರವರು ಪ್ರಸಿದ್ಧ ಸಿನಿಮಾ ನಿರ್ದೇಶಕ ಮತ್ತು ನಟ ರಾಜ್ ಕಪೂರ್ ರವರ ಎರಡನೆಯ ಮಗ ಇವರ ಸಹೋದರರು ಸುಪರಿಚಿತ ನಟರು: ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್. ರಣ್‌ಬೀರ್ ಕಪೂರ್ ರವರು ನಟನಾ ಪಿತೃರಾಗಿದ್ದರು. ರಿಷಿ ಅವರು ಇಂದಿನ ನಟಿಯರಾದ ಕರಿಶ್ಮಾ ಕಪೂರ್ ಮತ್ತು ಕರೀನಾ ಕಪೂರ್ ರವರ ಚಿಕ್ಕಪ್ಪ. ಇವರು ಪಂಜಾಬಿ ಹಿಂದೂ ಖಾತ್ರಿ ವಂಶದವರು. == ವೃತ್ತಿಜೀವನ == ರಿಷಿ ಕಪೂರ್ ಮೊದಲನೆಯ ರಂಗಪ್ರವೇಶ ಅವರ ತಂದೆಯ 1970 ರಲ್ಲಿನ ಸಿನಿಮಾ ಮೇರಾ ನಾಮ್ ಜೋಕರ್ (ನನ್ನ ಹೆಸರು ಜೋಕರ್ ), ಅವರ ತಂದೆಯ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಕಪೂರ್ ರವರು ನಟಿಸಿದ ಮೊದಲ ಚಿತ್ರ ಡಿಂಪಲ್ ಕಪಾಡಿಯರವರ ವಿರುದ್ಧ 1973 ರಲ್ಲಿ ತಯಾರಾದ ಪ್ರಸಿದ್ಧ ಸಿನಿಮಾ ಬಾಬಿ ಇದು ಅತ್ಯಲ್ಪಕಾಲದಲ್ಲಿಯೇ ಯುವಕರ ಜನಮನ್ನಣೆಗಳಿಸಿತು. ಅವರು ಅಲ್ಲಿಂದ ಸುಮಾರು ನೂರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಇವರು ಯುವ ನಟಿಯರೊಂದಿಗೆ ಪ್ರೇಮಪ್ರಸಂಗಗಳಲ್ಲಿ 2000 ಇಸವಿಯವರೆಗೆ : ನ ತಡವಾದ ಬಿಡುಗಡೆಯ ತನಕ ನಾಯಕ ನಟನಾಗಿ ನಟಿಸಿದ್ದಾರೆ. ಅವರು ಹಮ್ ತುಮ್ (2004) ಮತ್ತು ಫನ್ನಾ (2006)ದಲ್ಲಿ ಪೋಷಕ ಪಾತ್ರದೊಂದಿಗೆ ನಟಿಸಿದ್ದಾರೆ. ಅವರು 1998 ರಲ್ಲಿ ತಾರೆಯರಾದ ರಾಜೇಶ್ ಖನ್ನಾ, ಐಶ್ವರ್ಯಾ ರೈ, ಅಕ್ಷಯ್ ಖನ್ನಾ, ಖಾದರ್ ಖಾನ್, ಪರೇಶ್ ರಾವಲ್ ಮತ್ತು ಜಸ್ಪಾಲ್ ಭಟ್ಟಿ ಅವರು ನಟಿಸಿರುವ ಆ ಅಬ್ ಲೌಟ್ ಚಲೇ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಅವರು ನಮಸ್ತೆ ಲಂಡನ್ ಮತ್ತು ಅವರ ಸಹೋದರ ಆದಿತ್ಯ ರಾಜ್ ಕಪೂರ್(ರಿಷಿಯವರ ಚಿಕ್ಕಪ್ಪ ಶಮಿ ಕಪೂರ್‌ರವರ ಮಗ) ನಿರ್ದೇಶಿಸಿದ ಇಂಗ್ಲೀಷ್ -ಭಾಷೆಯ ಸಿನಿಮಾ ಡೋನ್ಟ್ ಸ್ಟಾಪ್ ಡ್ರೀಮಿಂಗ್‌‌ ನಲ್ಲಿ ನಟಿಸಿದ್ದಾರೆ. ಇವರು ಒಳ್ಳೆಯ ಅನುಭವಿ ನಟ ಕಮಲಹಾಸನ್ ಜೊತೆ ಸಾಗರ್ ಸಿನಿಮಾದಲ್ಲಿ ನಟಿಸಿದ್ದಾರೆ ಇದು ಅಧಿಕೃತವಾಗಿ ಆಸ್ಕಾರ್‌ಗೆ ಕಳುಹಿಸಲಾಗಿತ್ತು. ರಿಷಿ ಅವರು 'ಚಿಂಟು ಜಿ' ಸಿನಿಮಾದಲ್ಲಿ ಸ್ವತಃ ಅವರೇ ನಟಿಸಿದ್ದಾರೆ. ಅವರ ತಂದೆ ರಾಜ್ ಕಪೂರ್, ಅವರ ತಾಯಿ, ಅವರ ಪತ್ನಿ ಮತ್ತು ಅವರ ಹಿಂದಿನ ಚಿತ್ರಗಳಾದ ಚಾಂದನಿ, ಮೇರಾ ನಾಮ್ ಜೋಕರ್ ಮತ್ತು ಇತರೆಯನ್ನು ಉಲ್ಲೇಖ ಹೊಂದಿರುವುದರನ್ನು ಚಿತ್ರ ಒಳಗೊಂಡಿದೆ. == ವೈಯಕ್ತಿಕ ಜೀವನ == ರಿಷಿ ಕಪೂರ್ ನೀತೂ ಸಿಂಗ್‌,ರವರೊಂದಿಗೆ 13 ಏಪ್ರಿಲ್ 1979 ರಲ್ಲಿ ನಿಶ್ಚಿತಾರ್ಥವಾದ ಮೇಲೆ ಅವರೊಂದಿಗೆ ಹಲವಾರು ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ ನಂತರ 1980 ರಲ್ಲಿ ಅವರೊಂದಿಗೆ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ರಣಬೀರ್ ಕಪೂರ್, ಅವರು ಕೂಡಾ ನಟ, ಮತ್ತು ರಿಧಿಮಾ ಕಪೂರ್. == #ಪ್ರಶಸ್ತಿಗಳು == 1970 - ಮೇರಾ ನಾಮ್ ಜೋಕಾರ್‌ ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತಿ[೧] 2008-04-21 ವೇಬ್ಯಾಕ್ ಮೆಷಿನ್ ನಲ್ಲಿ. ಮೇರಾ ನಾಮ್ ಜೋಕಾರ್ ಸಿನಿಮಾದಲ್ಲಿ ಉತ್ತಮ ಬಾಲ ನಟನಾಗಿ 1971- ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಭಿಸಿತು. 1973 -ರಲ್ಲಿ ಬಾಬಿ ಸಿನಿಮಾಗಾಗಿ ಫಿಲ್ಮ್ ಫೇರ್‌ನ ಉತ್ತಮ ನಟ ಪ್ರಶಸ್ತಿ ಲಭಿಸಿತು 2006 - ಜೀವಮಾನದ ಸಾಧನೆಗಾಗಿ ಝೀ ಸಿನಿ ಪ್ರಶಸ್ತಿ 2007 - ಎಂಟಿವಿ ಲೈಕ್ರಾ ಪ್ರಶಸ್ತಿಗಳು: 2006 ರ ಮಹಾ ಸ್ಟೈಲ್ ಐಕಾನ್ [5] 2008 - ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ 2008 - ಎಫ್‌ಐಸಿಸಿಐ "ಲಿವಿಂಗ್ ಲೆಜೆಂಡ್ ಇನ್ ಎಂಟರ್‌ಟೈನ್‌ಮೆಂಟ್" ಪ್ರಶಸ್ತಿ [೨] 2008-09-08 ವೇಬ್ಯಾಕ್ ಮೆಷಿನ್ ನಲ್ಲಿ. [೩] 2008-12-29 ವೇಬ್ಯಾಕ್ ಮೆಷಿನ್ ನಲ್ಲಿ. 2008 - 10 ನೆಯ ಮುಂಬಯಿ‌ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಇಂಟರ್‌ನ್ಯಾಷನಲ್ ಫಿಲ್ಮ್‌ (ಎಂ.ಎ.ಎಂ.ಐ) ಜೀವನಾವಧಿ ಸಾಧನೆಯ ಪ್ರಶಸ್ತಿ ಲಭಿಸಿತು[೪] 2009- ಸಿನಿಮಾದ ನೆರವಿಕೆಗಾಗಿ ರಷ್ಯಾ ಸರ್ಕಾರದಿಂದ ಮನ್ನಣೆ ಸಿಕ್ಕಿತು[೫] 2010 -ಅಪ್ಸರಾ ಪ್ರಶಸ್ತಿಗಳು: ಲವ್ ಆಜ್ ಕಲ್ ಚಿತ್ರದಲ್ಲಿ ಪೋಷಕ ಪಾತ್ರದ ಉತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿತು [೬] 2010 - ಲವ್ ಆಜ್ ಕಲ್‌ ನಲ್ಲಿ ಉತ್ತಮ ಪೋಷಕ ಪಾತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಲಭಿಸಿತು == ಚಲನಚಿತ್ರಗಳ ಪಟ್ಟಿ == == ನಿಧನ == ರಿಷಿ ಕಪೂರ್ ಇವರು ೩೦ ಏಪ್ರಿಲ್ ೨೦೨೦ ರಂದು ನಿಧನ ಹೊಂದಿದರು. == ಆಕರಗಳು == == ಹೊರಗಿನ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಕಪೂರ್